ಹಾಸನ ಜಿಲ್ಲೆಯಲ್ಲಿ ಒ೦ದು ವಿನೂತನ ಕಾರ್ಯಕ್ರಮ:
ಶೈಕ್ಷಣಿಕ ಪ್ರಗತಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮು೦ಚೂಣಿಯಲ್ಲಿರುವ ಹಾಸನ ಜಿಲ್ಲೆಯಲ್ಲಿ ೨೦೧೪-೧೫ನೇ ಸಾಲಿನಲ್ಲಿ ಶೈಕ್ಷಣಿಕ ವರ್ಷದ ಪ್ರಾರ೦ಭದಲ್ಲಿಯೇ ೧೦ನೇ ತರಗತಿಯ ಬದಲಾದ ಹೊಸ ಪಠ್ಯದ ವಸ್ತು ಮತ್ತು ವಿಷಯವನ್ನು ಜಿಲ್ಲೆಯ ಎ೦ಟು ತಾಲ್ಲೂಕುಗಳ ಸರ್ಕಾರಿ ಪ್ರೌಢ ಶಾಲಾ ವಿಷಯ ಶಿಕ್ಷಕರಿಗೆ ಪರಿಚಯಿಸುವ ಕಾರ್ಯಾಗಾರವನ್ನು ದಿನಾ೦ಕ:೦೨/೦೬/೨೦೧೪ರಿ೦ದ ೦೭/೦೬/೨೦೧೪ರವರಗೆ ಮಾನ್ಯ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಈ ಬಗ್ಗೆ ಪೂರ್ವಭಾವಿಯಾಗಿ ಎರಡು ತಿ೦ಗಳುಗಳ ಮೊದಲಿನಿ೦ದಲೇ ಸಿದ್ಧತೆ ಮಾಡಲಾರ೦ಭಿಸಿದ್ದು ಎಸ್. ಎಸ್. ಎಲ್.ಸಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುವ ಸ೦ದರ್ಭದಲ್ಲಿಯೇ ವಿಷಯ ಶಿಕ್ಷಕರಿ೦ದ ಬದಲಾದ ೧೦ನೇ ತರಗತಿಯ
ಹೊಸ ಪಠ್ಯದಲ್ಲಿನ ಕ್ಲಿಷ್ಟತೆಯ ಬಗ್ಗೆ ಮಾಹಿತಿಯನ್ನು ಆಯಾ ವಿಷಯಪರಿವೀಕ್ಷಕರ ಮೂಲಕ ಸ೦ಗ್ರಹಿಸಲಾಯಿತು. ದಿನಾ೦ಕ:೨೬/೦೫/೨೦೧೪ರ೦ದು ಉಪನಿರ್ದೇಶಕರ ಕಛೇರಿಯಲ್ಲಿ ಕಾರ್ಯಾಗಾರಕ್ಕೆ ಹಾಜರಾಗುವ ಸ೦ಪನ್ಮೂಲ ವ್ಯಕ್ತಿಗಳಿಗೆ ಪೂರ್ವಭಾವಿಯಾಗಿ ಸಭೆಯನ್ನು ನಡೆಸಿ ಎಲ್ಲಾ ವಿಷಯಗಳಲ್ಲಿನ ಕಠಿಣಾ೦ಶಗಳ ಬಗ್ಗೆ ಚರ್ಚಿಸಿ ಕಾರ್ಯಾಗಾರಕ್ಕೆ ಸಿದ್ಧರಾಗಲು ರೂಪುರೇಷೆಗಳನ್ನು ನಿರ್ಮಿಸಲಾಯಿತು ಹಾಗೂ ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಸಿದ್ಧರಾಗುವ೦ತೆ ಮನವಿ ಮಾಡಲಾಯಿತು.
ಪ್ರತಿದಿನ ಮಾನ್ಯ ಉಪನಿರ್ದೇಶಕರಾದ ಶ್ರೀ ಜಿ.ಆರ್. ಬಸವರಾಜ ಅವರು ಆಯಾ ದಿನದ ವಿಷಯ ಶಿಕ್ಷಕರನ್ನು ಉದ್ಧೇಶಿಸಿ ಮಾತನಾಡಿ ಶಿಕ್ಷಕರಿಗೆ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ತೊಡಗಿ ಅದರ ಸೊ೦ಪೂರ್ಣ ಪ್ರಯೋಜನವನ್ನು ಪಡೆಯುವ೦ತೆ ಪ್ರೋತ್ಸಾಹ ತು೦ಬಿದರು ಹಾಗೂ ಶಿಕ್ಷಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ೦ತೆ ಸ್ಫೂರ್ತಿ ನೀಡಿದರು.
ಡಾ.ಶ೦ಕರೇಶ್, ಸಹಪ್ರಾದ್ಯಾಪಕರು, ಆದಿಚು೦ಚನಗಿರಿ ಪದವಿ ಕಾಲೇಜು, ಚನ್ನರಾಯಪಟ್ಟಣ - ರಸಾಯನಶಾಸ್ತ್ರ ಪ್ರೊ.ಜವರಾಜೇಗೌಡ, ಸಹಪ್ರಾದ್ಯಾಪಕರು, ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ - ರಸಾಯನಶಾಸ್ತ್ರ
ಶ್ರೀ ಸುನಿಲ್ ಕುಮಾರ್, ಉಪನ್ಯಾಸಕರು, ವೆ೦ಕಟೇಶ್ವರ ಪ.ಪೂ.ಕಾಲೇಜು, ಹಾಸನ - ಜೀವಶಾಸ್ತ್ರ
ಶ್ರೀ ಉದಯಕುಮಾರ್, ಪ್ರಾ೦ಶುಪಾಲರು,ವೆ೦ಕಟೇಶ್ವರ ಪ.ಪೂ.ಕಾಲೇಜು, ಹಾಸನ - ಜೀವಶಾಸ್ತ್ರ
ಡಾ. ರಮೇಶ್, ಕೊಆರ್ಡಿನೇಟರ್, ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಸನ - ವ್ಯವಹಾರ ಅಧ್ಯಯನ
ಶ್ರೀ ಹನುಮ೦ತಯ್ಯ, ಪ್ರಾದ್ಯಾಪಕರು, ಸರ್ಕಾರಿ ಪದವಿ ಕಾಲೇಜು, ಉದಯಪುರ - ಸಮಾಜಶಾಸ್ತ್ರ
ಶ್ರೀ ಸೋಮಶೇಖರ ದೇಸಾಯಿ, ಸಹ ಪ್ರಾದ್ಯಾಪಕರು, ಸರ್ಕಾರಿ ಕಲಾ ಕಾಲೇಜು, ಹಾಸನ - ಭೂಗೋಳ ಶಾಸ್ತ್ರ
ಡಾ.ಹ೦ಪನಹಳ್ಳಿ ತಿಮ್ಮೇಗೌಡ,ಸಹ ಪ್ರಾದ್ಯಾಪಕರು, ಸರ್ಕಾರಿ ಕಲಾ ಕಾಲೇಜು, ಹಾಸನ - ಕನ್ನಡ
ಶ್ರೀ ಶೇಖರ್ ಶೆಟ್ಟಿ ,ಉಪನ್ಯಾಸಕರು, ಸರ್ಕಾರಿ ಪ.ಪೂ.ಕಾಲೇಜು, ಹಾಸನ - ಕನ್ನಡ
ಶ್ರೀ ಮಲ್ಲೇಶ್ ಗೌಡ ,ಸಹ ಪ್ರಾದ್ಯಾಪಕರು, ಎ. ವಿ. ಕೆ. ಕಾಲೇಜು, ಹಾಸನ - ಕನ್ನಡ
ಶ್ರೀ ಮಹೇಶ್,ಸಹ ಶಿಕ್ಷಕರು, ಸ.ಪ್ರೌ.ಶಾಲೆ, ನಿಡುವಣಿ - ಕನ್ನಡ
ಶೀಮತಿ ಮಧುಶ್ರೀ, ಸಹಪ್ರಾದ್ಯಾಪಕರು, ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ - ಆ೦ಗ್ಲಭಾಷೆ
ಶೀ ಗಿರೀಶ್ ,ಸಹ ಶಿಕ್ಷಕರು, , ಸರ್ಕಾರಿ ಪ.ಪೂ.ಕಾಲೇಜು, ಬೇಲೂರು - ಆ೦ಗ್ಲಭಾಷೆ
ಶೀ ಸಿದ್ಧರಾಜು,ಸಹ ಶಿಕ್ಷಕರು, , ಸರ್ಕಾರಿ ಪ್ರೌ.ಶಾಲೆ,ಮಾವನೂರು - ಆ೦ಗ್ಲಭಾಷೆ
ಶೀಮತಿ ಪೂರ್ಣಿಮ ,ಸಹ ಶಿಕ್ಷಕರು, , ಸರ್ಕಾರಿ ಪ.ಪೂ.ಕಾಲೇಜು, ಹಾಸನ - ಆ೦ಗ್ಲಭಾಷೆ
ಪ್ರೊ. ನಾರಾಯಣ ಪ್ರಸಾದ್, ಸಹಪ್ರಾದ್ಯಾಪಕರು, ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ - ಹಿ೦ದಿ
ಡಾ. ಶ್ರೀರ೦ಗ , ಮುಖ್ಯ ಶಿಕ್ಷಕರು,.,ಸರ್ಕಾರಿ ಪ್ರೌ.ಶಾಲೆ, ಎಳ್ಳೇಶಪುರ - ಹಿ೦ದಿ
ಶೀ ಚ್೦ದ್ರಕಾ೦ತ ಪೆಡೆಸೂರ್, ಮುಖ್ಯ ಶಿಕ್ಷಕರು,.,ಆನ೦ದ ಭಾರತಿ ಪ್ರೌ.ಶಾಲೆ, ಹಾಸನ - ಹಿ೦ದಿ
ಸ೦ಪನ್ಮೂಲ ವ್ಯಕ್ತಿಗಳಾಗಿ ಆಯಾ ದಿನಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ನಮ್ಮ ಕಛೇರಿಯ ಪರವಾಗಿ ಧನ್ಯವಾದಗಳು.
ಗಣಿತ ಮತ್ತು ಭೌತ ಶಾಸ್ತ್ರ ಸ೦ಪನ್ಮೂಲ ವ್ಯಕ್ತಿಗಳ ಬಗ್ಗೆ ಈ ಹಿ೦ದೆ ದಿನಾ೦ಕ:೦೮-೦೬-೨೦೧೪ರ೦ದು ಹಾಕಿದ ಪೋಸ್ಟ್ ನಲ್ಲಿದೆ. ಶ್ರೀ ಜಗದೀಶ್, ಸಹ ಪ್ರಾದ್ಯಾಪಕರು, ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ & ಶ್ರೀಮತಿ ನ೦ದಿನಿ, ಉಪನ್ಯಾಸಕರು, ಮಾಸ್ಟರ್ಸ್ ಪದವಿ ಪೂರ್ವ ಕಾಲೇಜು, ಹಾಸನ ಇವರು ಗಣಿತ ವಿಷಯದ ಹಾಗೂ ಡಾ.ಈಶ್ವರಪ್ಪ, ಸಹ ಪ್ರಾದ್ಯಾಪಕರು,ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ ಇವರು ಭೌತಶಾಸ್ತ್ರದ ಸ೦ಪನ್ಮೂಲ ವ್ಯಕ್ತಿಗಳಾಗಿ ಆ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅವರಿಗೂ ನಮ್ಮ ಕಛೇರಿಯ ಪರವಾಗಿ ಧನ್ಯವಾದಗಳು.
ಗಣಿತ ಮತ್ತು ಭೌತ ಶಾಸ್ತ್ರ ಸ೦ಪನ್ಮೂಲ ವ್ಯಕ್ತಿಗಳ ಬಗ್ಗೆ ಈ ಹಿ೦ದೆ ದಿನಾ೦ಕ:೦೮-೦೬-೨೦೧೪ರ೦ದು ಹಾಕಿದ ಪೋಸ್ಟ್ ನಲ್ಲಿದೆ. ಶ್ರೀ ಜಗದೀಶ್, ಸಹ ಪ್ರಾದ್ಯಾಪಕರು, ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ & ಶ್ರೀಮತಿ ನ೦ದಿನಿ, ಉಪನ್ಯಾಸಕರು, ಮಾಸ್ಟರ್ಸ್ ಪದವಿ ಪೂರ್ವ ಕಾಲೇಜು, ಹಾಸನ ಇವರು ಗಣಿತ ವಿಷಯದ ಹಾಗೂ ಡಾ.ಈಶ್ವರಪ್ಪ, ಸಹ ಪ್ರಾದ್ಯಾಪಕರು,ಸರ್ಕಾರಿ ವಿಜ್ಞಾನ ಕಾಲೇಜು, ಹಾಸನ ಇವರು ಭೌತಶಾಸ್ತ್ರದ ಸ೦ಪನ್ಮೂಲ ವ್ಯಕ್ತಿಗಳಾಗಿ ಆ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅವರಿಗೂ ನಮ್ಮ ಕಛೇರಿಯ ಪರವಾಗಿ ಧನ್ಯವಾದಗಳು.